ರಾಜ್ಯದ ರೈತರು, ಸಹಕಾರ ಸಂಘಗಳ ಸದಸ್ಯರು ಹಾಗೂ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಯಶಸ್ವಿನಿ ಯೋಜನೆಯ ನವೀಕರಣ (Renewal) ಕಾರ್ಡ್‌ಗಳು ಸಂಬಂಧಿತ ಸಹಕಾರ ಸಂಘಗಳು ಹಾಗೂ ಕಚೇರಿಗಳಿಗೆ ತಲುಪಿದ್ದು, ಸದಸ್ಯರು ತಮ್ಮ ಹೆಸರಿನ ಕಾರ್ಡ್‌ಗಳನ್ನು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ. ಯಶಸ್ವಿನಿ ಯೋಜನೆಯು ಕರ್ನಾಟಕ ಸರ್ಕಾರದ ಜನಪ್ರಿಯ ಆರೋಗ್ಯ ರಕ್ಷಣಾ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಡಿ ಸದಸ್ಯರು ರಾಜ್ಯದ ವಿವಿಧ ನೋಂದಾಯಿತ ಆಸ್ಪತ್ರೆಗಳಲ್ಲಿ ನಿಗದಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಯೋಜನೆಯ […]

