Gold Rate : ಹಾರ್ಮುಜ್ ಬಂದ್ ಶಾಕ್: ಚಿನ್ನದ ದರದಲ್ಲಿ ಭರ್ಜರಿ ಜಿಗಿತ,

ಬೆಂಗಳೂರು: ಜಾಗತಿಕ ರಾಜಕೀಯ ಉದ್ವಿಗ್ನತೆಗಳು ಮತ್ತೆ ತೀವ್ರಗೊಂಡಿರುವ ಹಿನ್ನೆಲೆ ಚಿನ್ನದ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರಿದಿದೆ. ಇತ್ತೀಚೆಗೆ Iran ಮತ್ತು Israel ನಡುವಿನ ತೀವ್ರ ಸಂಘರ್ಷ ಹಾಗೂ ಶಾಂತಿ ಒಪ್ಪಂದದ ಘೋಷಣೆಗಳ ನಡುವೆಯೇ ನಡೆದ ಹೊಸ ದಾಳಿಗಳು ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಿಸಿವೆ. ಇದರ ಪರಿಣಾಮವಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆ ಆಯ್ಕೆಯಾದ ಚಿನ್ನದತ್ತ ಮತ್ತೆ ಒಲವು ತೋರಿದ್ದಾರೆ.

gold rate

ಅದರ ಜೊತೆಗೆ ಪ್ರಮುಖ ಸಾಗಣೆ ಮಾರ್ಗವಾದ Strait of Hormuz ತಾತ್ಕಾಲಿಕವಾಗಿ ಬಂದ್ ಆಗಿರುವ ಸುದ್ದಿ ಜಾಗತಿಕ ತೈಲ ಹಾಗೂ ಸರಕು ಸರಬರಾಜು ಸರಪಳಿಗೆ ಹೊಡೆತ ನೀಡಿದೆ. ಇದರಿಂದಾಗಿ ಹಣಕಾಸು ಮಾರುಕಟ್ಟೆಗಳಲ್ಲಿ ಅಸ್ಥಿರತೆ ಉಂಟಾಗಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.

ಜೂನ್ 22, 2026 ಸೋಮವಾರದಂದು ಚಿನ್ನದ ದರಗಳಲ್ಲಿ ಮತ್ತೆ ಏರಿಕೆ ದಾಖಲಾಗಿದೆ. 24 ಕ್ಯಾರೆಟ್ ಶುದ್ಧ ಚಿನ್ನದ 1 ಗ್ರಾಂ ಬೆಲೆ ₹43 ಏರಿಕೆಯಾಗಿದ್ದು ₹14,651ಕ್ಕೆ ತಲುಪಿದೆ. ಅದೇ ರೀತಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ₹430 ಏರಿಕೆಯಾಗಿದ್ದು ₹1,46,510 ಆಗಿದೆ. ಕಳೆದ ವಾರ ಕನಿಷ್ಠ ಮಟ್ಟದಲ್ಲಿ ₹1,45,860ಕ್ಕೆ ಇಳಿದಿದ್ದ ಚಿನ್ನವು ಈಗ ಮತ್ತೆ ಮೇಲ್ಮಟ್ಟಕ್ಕೆ ಹೋಗಿದೆ.

22 ಕ್ಯಾರೆಟ್ ಚಿನ್ನದ ದರವೂ ಸಹ ಏರಿಕೆಯ ಹಾದಿಯಲ್ಲಿದೆ. 1 ಗ್ರಾಂ ಬೆಲೆ ₹40 ಏರಿಕೆಯಾಗಿದ್ದು ₹13,430 ಆಗಿದೆ. 10 ಗ್ರಾಂ ಬೆಲೆ ₹4,00 ಏರಿಕೆಯೊಂದಿಗೆ ₹1,34,300ಕ್ಕೆ ತಲುಪಿದೆ.

ಇದಕ್ಕೆ ವಿರುದ್ಧವಾಗಿ ಬೆಳ್ಳಿ ಬೆಲೆ ಇಂದು ಸ್ಥಿರವಾಗಿದೆ. ಮಾರುಕಟ್ಟೆ ವರದಿಗಳ ಪ್ರಕಾರ ಗ್ರಾಂ ಬೆಲೆ ₹250 ಮಟ್ಟದಲ್ಲೇ ಮುಂದುವರಿದಿದೆ.

Bengaluruನಲ್ಲಿ ಜ್ವಲಂತ ಜಾಗತಿಕ ಸುದ್ದಿಗಳ ಪರಿಣಾಮ ಹೂಡಿಕೆದಾರರು ಎಚ್ಚರಿಕೆಯಿಂದ ವರ್ತಿಸುತ್ತಿದ್ದಾರೆ. ತಜ್ಞರ ಪ್ರಕಾರ, ಅಂತಾರಾಷ್ಟ್ರೀಯ ರಾಜಕೀಯ ಉದ್ವಿಗ್ನತೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *